Sunday, 25 June 2017


ಮಲೆನಾಡಿನ ಮಳೆಹಾಡು


ಹಾಡು ಹಗಲಲ್ಲೇ ಕತ್ತಲಾವರಿಸಿದಂತೆ 
ಭುವಿ ಭಾನು ಒಂದಾಗಿಸುವ ಮಳೆ 
ಬಣ್ಣ ಬಣ್ಣದ ಕೊಡೆಗಳ ಮಾಟ 
ಅಲ್ಲಲ್ಲಿ ಗೊರಬೆಗಳ ನೋಟ 

ನಗರದ ಜನ ಜೀವನಕ್ಕದು ಅಸ್ತವ್ಯಸ್ತ 
ರೇನ್ ವಾಟ್  ನಾನ್ಸೆಸ್  ಅಂತೆಲ್ಲ 
ಹೈ ಪೈ ಗಳಿಂದ ಬೈಸಿಕೊಳ್ಳುವ ವರುಣ 
ರಾಜಧಾನಿಯಿಂದ ಮರೆಯಾಗಿ ಕಂಡುಕೊಳ್ಳುವುದು 
ಮಲೆನಾಡಿನಲ್ಲೇ ಅದರ ಅಸ್ತಿತ್ವ 

ಮಾರ್ಚ್ ಏಪ್ರಿಲ್  ಮೇ 
ಬೆಂಗಳೂರು ಮೈಸೂರು ಹುಬ್ಬಳ್ಳಿ ಮಂಗಳೂರು 
ಮಹಾನಗರಗಳಿಗೆ ಟೂರ್ ಹೋಗುವುದು ನೋಡಿ 
ಎಲ್ಲಿ ಸುತ್ತಾಡಿದರೂ  ಕೊನೆಗೆ 
ಜೂನ್ ಆಗಸ್ಟ್ ವರೆಗೆ 
ಮಲೆನಾಡು, ಕರಾವಳಿಯಲ್ಲಿ ಠಿಕಾಣಿ ಹೂಡುವುದು ರೂಡಿ 

ಮಳೆ ಇಲ್ಲದಿದ್ದರೆ ಮಲೆನಾಡಿಗೆ 
ಯಾರಿಗೂ ಬೇಡ ಅವರ ಪಾಡು 
ಅಲ್ಲಿ ಮಳೆ ಹಾಡಿನ ಬದಲಿಗೆ ನೋವಿನ ಹಾಡು 
ಬಿಳುತ್ತಿರುವಂತೆ ಒಂದೆರಡು ಮಳೆ 
ಅಟ್ಟದ ಮೇಲಿಂದ ವರ್ಸದ  ಹಿಂದೆ ಇಟ್ಟಿದ್ದ 
ದೂಳು  ತಿನ್ನುತ್ತಿರುವ ಕೊಡೆ ಈಚೆಗೆ ಬರುತ್ತದೆ 

ಬಟನ್ ಶೂ ರೇನ್ ಕೋಟ್ ಗಳೆಲ್ಲ 
ಹಳ್ಳಿಯ ಹೈಟೆಕ್ ಗಳಾಗಿ ಕಂಗೊಳಿಸುತ್ತವೆ ತರುಣರಲ್ಲಿ 
ಗೊರಬೆ,ಪ್ಲಾಸ್ಟಿಕ್ ಹಾಳೆ, ಮಟ್ಟಾಳೆ 
ಪ್ರಾಚೀನ ಪಳೆಯುಳಿಕೆಗಳು ಇಂದಿಗೂ ತಮ್ಮ 
ಅಸ್ತಿತ್ವ ವನ್ನು ಉಳಿಸಿಕೊಂಡಿವೆ ಹಳಬರಲ್ಲಿ 

ಅಜ್ಜನಿಗೆ ಬೇಕು ಒಂದಿಷ್ಟು ನಶ್ಯ 
ಬಿಸಿ ಇನ್ನೂ ಬೇಕಿದ್ದರೆ ಹಾಕಬಹುದು 
ಒಂದೆರಡು ಪೆಗ್ ಅದು ಬೇರೆ ವಿಶ್ಯ 
ಅಜ್ಜಿ ಮಾತ್ರ ಈಚೆಗೆ ಬರಲಾರಳು 
ಒಲೆ ಮುಂದಿನ  ಬೆಂಕಿಯಿಂದ 

ಒಲೆಗೆ ಹಾಕಿದರೆ ಹಲಸಿನಕಾಯಿ ಬೀಜ 
ತಿಂದರೆ ಆಹಾ ಎಂತಾ ಮಜಾ 
ಇಂತ ರುಚಿ ನಗರದ ಪಿಜ್ಜಕ್ಕೆಲ್ಳುಂಟು  
ಹಪ್ಪಳದ ಸವಿ ಯಾರಿಗೆಲ್ಲ ಗೊತ್ತು 
ಸಂಡಿಗೆ,ಬಾಳಕ,ಹಲಸಿನ ಕಡುಬು 
ಪಿತ್ರೋಡೆ , ಹುರುಳಿ ಸಾರು ಬಾಯೂರುವುದು ನೀರು 
ಮಾವಿನ ಮೀಡಿಯಾ ಉಪ್ಪಿನಕಾಯಿ, 
ಜೀರಿಗೆ ಕಷ್ಯಿ 
ಬೇಡ ಬಿಡಿ ಯಾಕೆ ಸುಮ್ಮನೆ 
ನಿಮ್ಮ ಹೊಟ್ಟೆ ಉರಿಸುವುದು 

ಭೂರಮೆಯ ಒಡಲೊಳಗೆ ಪ್ರೀತಿಯ ಸಿಹಿ ಚುಂಬನ 
ಕಾಡಿನ ಮರಗಳಿಗೂ ಮಳೆ ನೀರು ಅಮೃತ ಸಿಂಚನ 
ಜಿರಂಡೆಗಳ ಕೂಗು ಮಳೆ ಬರುವ ಸಿಗ್ನಲ್ 
ಬಬ್ಬರಿಗಳು ನುಡಿಸುವುದು ಗದ್ದಲದ ವಾದ್ಯ 
ಕಪ್ಪೆಗಳ ವಟ ವಟ,ಮರಕುಟಕದ ಕಟ ಕಟ 
ಮುಂಗಾರಿನ ಮೋಡಕ್ಕೆ ಕುಣಿಯುವ 
ನವಿಲುಗಳ ಪ್ಯಾಶನ್ ಪ್ರದರ್ಶನ 

ಗುಡುಗು ಸಿಡಿಲು ಮಿಂಚಿನ ಆರ್ಭಟ 
ಅವು ಚಂಡೆ ಮದ್ದಲೆಗಳಂತೆ 
ಸದ್ದಿಡುವ ದಿನಗಳಲಿ ಬೆಳಕು 
ಹರಿಯುದೇ ಇಲ್ಲವೆಂಬತೆ 
ಕತ್ತಲು ಆವರಿಸಿದ ಹೊತ್ತು 
ನಾಲ್ಕು ಕಂಬಳಿ ಹೊದ್ದು ಮಲಗಿದರೆ 
ಗೂಡುಗನ್ನೂ ನಾಚಿಸುವ ಭೀಕರ ಗೊರಕೆ 

ಮಳೆಯ ಅಂದ ಮಲೆನಾಡಿನಲ್ಲೇ ಚಂದ 
ಹಳ್ಳಿಗರಿಗೆ ಅದು ಸಂಭ್ರಮದಾನಂದ 
ಕಾನನದ ಸೌಂದರ್ಯ ರಾಶಿ ಸವಿದವರಿಗಷ್ಟೇ ಗೊತ್ತು 
ನಗರಿಕರಿಗೆ  ಎಲ್ಳುಂಟು ಈ ಭಾಗ್ಯ ಇವತ್ತು. 
     

No comments:

Post a Comment