Sunday, 16 April 2017

ಅವಳ ನೆನಪುಗಳು

ಮನಸ್ಸನ್ನು ಕಬ್ಬಿಣದಂತೆ
ದೃಢವಾಗಿರಿಸಿಕೊಂಡೆ
ತುಕ್ಕಿನಂತೆ ಸೆರಿಕೊಂಡವು
ಅವಳ ನೆನಪುಗಳು

ಮನಸ್ಸನ್ನು ಶಿಲೆಯಂತೆ
ಕಠಿಣವಾಗಿರಿಸಿಕೊಂಡೆ
ದೂಳಿನಂತೆ ಆವರಿಸಿಕೊಂಡವು
ಅವಳ ನೆನಪುಗಳು

ಮನಸ್ಸನ್ನು ನಿಂತ ನಿರಿನಂತೆ
ನಿಶ್ಚಲವಾಗಿರಿಸಿಕೊಂಡೆ
ಕ್ರಿಮಿಗಳಂತೆ ಸೆರಿಕೊಂಡವು
ಅವಳ ನೆನಪುಗಳು

ಮನಸ್ಸನ್ನು ಬದ್ದನಂತೆ
ನಿಗ್ರಹಿಸಿಕೊಂಡೆ
ಸನ್ಯಾಸಿನಿಯಂತೆ
ಸುತ್ತ ನೆರೆದವು
ಅವಳ ನೆನಪುಗಳು

ಅಭೀಕ್ಷೆ

ಹಾರುವ ಹಕ್ಕಿಗಳೆ
ನನಗೂ ಹಾರಲು ಕಲಿಸಿಕೊಡಿ
ದಿಗಂತದಾಚೆಗೆ ಹಾರಬೇಕು
ಭವ ಬಂಧನವ ಕಳೆಯಬೇಕು.

ಹಾಡುವ ಕೋಗಿಲೆಯೆ
ನನಗೂ ಹಾಡಲು ಕಲಿಸಿಕೊಡು
ರಾಗಗಳ ಮೀರಬೇಕು
ಗಂಧರ್ವರ ಸೇರಬೇಕು

ಈಜಾಡುವ ಮೀನುಗಳೆ
ನನಗೂ ಈಜಲು ಕಲಿಸಿಕೊಡಿ
ಮನಸಿನಾಳಕೆ ದುಮುಕಬೇಕು
ಮುತ್ತುಗಳ ಹಡುಕಬೇಕು.

ನರ್ತಿಸುವ ನವಿಲುಗಳೆ
ನನಗೂ ಕುಣಿಯಲು ಕಲಿಸಿಕಡಿ
ಮೋಡಗಳ ಕರೆಯಬೇಕು
ಭೂರಮೆಯ ತಣಿಸಬೇಕು.

ನಗುತಿರುವ ಮುಗ್ದ ಮಗುವೆ
ನನಗೂ ನಗುವುದ ಕಲಿಸಿಕೊಡು
ಮನಸುಗಳ ಬೆಸೆಯಬೇಕು
ಪ್ರೀತಿಯನು ಹಂಚಬೇಕು



ಸಮಯವಿಲ್ಲ

ಧೋ ಎಂದು ಸರಿಯುವ  ವರ್ಷ ಕಾಲದ
ಮಳೆಯ ಬಿರಸು ನೋಡಲೆನಗೆ,
ಮತ್ತದರ ಜೊತೆಗೇ ಬರುವ
ಗಡುಗು ಸಿಡಿಲುಗಳ ಅರ್ಭಟವ ನೋಡಿ
ಪುಳಕಗೊಳ್ಳಲೆನಗೆ ಸಮಯವಿಲ್ಲ

ಬಿರಿದ ಮಲ್ಲಿಗೆಯ ಸುವಾಸನೆಯ ಆಘ್ರಾಹನೆಗೆ
ಮತ್ತದರ ಸಾಂದ್ರತೆಗೆ ತಲೆದೂಗಲೆನಗೆ,
ವೈಶಾಖ ಹೂಗಳ ಗಂಧಕ್ಕೆ
ಮತ್ತದರ ಮದುರ ಸ್ಪರ್ಷಕ್ಕೆ
ಮನಸೋಲಲೆನಗೆ ಸಮಯವಿಲ್ಲ

ವಸಂತ ಕಾಲದಲಿ ಕೆಂಪು ಚಿಗುರೆಲೆ ಬಿಡುವ
ಮಾಮರದ ಉತ್ಸಾಹವನ್ನು ನೋಡಲೆನಗೆ,
ಮತ್ತದರ ಉಧರದೊಳಗೆ  ಕುಳಿತು ಕೂಗುವ
ಕೋಗಿಲೆಯ ಧನಿಗೆ ಕಿವಿಗೊಡಲೆನಗೆ ಸಮಯವಿಲ್ಲ

ತೀರದಲಿ ನೊರೆ ಹಾಲು ಚಿಮ್ಮಿಸುತ್ತ
ತೆರೆಯುಬ್ಬಿಸಿ ಕುಣಿದಾಡುವ
ಸಾಗರದ ಉನ್ಮತ್ತ ಅಲೆಗಳನ್ನು,
ಮತ್ತದರ ಸನಿಹದಲ್ಲಿ ಕುಳಿತು ಪಿಸುಗುಟ್ಟುತ್ತಿರುವ
ಪ್ರೇಮಿಗಳ ಲವಲವಿಕೆಯನ್ನು ನಡಲೆನಗೆ ಸಮಯವಿಲ್ಲ

ಚಿಟ್ಟೆಗಳ ಗಾಢ ಮೈಬಣ್ಣವ
ಮುಟ್ಟಿ ಮುಟ್ಟಿ ಆಶ್ಚರ್ಯಗೊಳ್ಳಲು,
ಮತ್ತದರ ನವಿರು ಪುಕ್ಕಗಳ ಮೃದುವಾಗಿ ಸವರಿ
ಕುಶಲವ ಕೇಳಲೆನಗೆ ಸಮಯವಿಲ್ಲ.

ಏಕಾಂತದಲ್ಲಿ ನನ್ನ ನಲ್ಲೆ  ಚುಂಬಿಸಲು
 ಕರೆಯುತಿರೆ ಬಿಡುವಾಗಿ ಬರಲೆನಗೆ ,
ಮತ್ತವಳ ರೇಷಿಮೆಯ ಜಡೆಗೆ
ಮಲ್ಲಿಗೆ ಹೂಗಳ ತಂದು ಮಡಿಸಲೆನಗೆ
ಸಮಯವಿಲ್ಲ ನನಗೆ ಸಮಯವಿಲ್ಲ